ಥಿಯೇಟರ್, ಸಮಸ್ಯೇಯೇ ಅಲ್ಲ

ನನಗೆ ತಿಳಿದ ಮಟ್ಟಿಗೆ ಅಣ್ಣಾವ್ರು ಹೋದಮೇಲೆ ಕನ್ನಡ ಚಿತ್ರರಂಗದಲ್ಲಿ ಈ ಥಿಯೇಟರ್ ಸಮಸ್ಯೆ ಅನ್ನೋದು ಹುಟ್ಕೊಂತು.ಪರಭಾಷಾ ಚಿತ್ರಗಳ ಹಾವಳಿ ಅನ್ನೋ ವಾಕ್ಯ ಕಾಲಕ್ರಮೇಣ ಜಾಸ್ತಿನೂ ಆಯ್ತು.ಇದರ ಜೊತೆ ಜೊತೆಗೆ ಮಲ್ಟಿಪ್ಲೆಕ್ಸ್ ಗಳ ಕನ್ನಡ ವಿರೋಧಿ ಧೋರಣೆ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗಲ್ಲ, ಹಾಗೆಯೇ ಬಹುತೇಕ ಜಿಲ್ಲೆಗಳ ಥಿಯೇಟರ್ ಗಳು ಕೆಲವೇ ಕೆಲವು ವಿತರಕರ ಕಪಿಮುಷ್ಠಿಯಲ್ಲಿ ಅಡಗಿವೆ, ಅವರು ಮನಬಂದಂತೆ ಬಾಡಿಗೆಯ ದರವನ್ನು ನಿಗದಿ ಪಡಿಸುತ್ತಾರೆ ಇತ್ಯಾದಿ ಇತ್ಯಾದಿ.ನನ್ನ ಪ್ರಕಾರ ಇದೊಂದು ಸಮಸ್ಯೆಯೇ ಅಲ್ಲ ಅಕಸ್ಮಾತ್ ಸಮಸ್ಯೆ ಎಂದಾದರೂ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತೆ.ಅದನ್ನು ಹುಡುಕುವ ಸಣ್ಣ ಪ್ರಯತ್ನ ನಮ್ಮಿಂದಾಗಬೇಕಷ್ಟೇ.ನನ್ನ ಸ್ವಂತ ಅನಿಸಿಕೆ ಏನಪ್ಪಾ ಅಂತಂದ್ರೆ ನಮ್ಮಲ್ಲಿ ಕನ್ನಡ ಚಿತ್ರರಂಗದ ಉಳಿವಿಗಾಗಿ ಒಗ್ಗಟ್ಟಿನ ಕೊರತೆ ಎದ್ದು ಕಾಣುವುದಲ್ಲದೇ ಯಾರೊಬ್ಬರೂ ಇದರ ಬಗ್ಗೆ ತಮ್ಮ ಸ್ವಂತ ಬೆಳವಣಿಗೆಗೆ ಕೊಡುವ ಸಮಯ ಮತ್ತು ಹಿತಾಸಕ್ತಿಯನ್ನು ತೋರುತ್ತಿಲ್ಲ.ಕೋಟಿ ಸಂಭಾವನೆ ಪಡೆಯುವ ನಾಯಕ ನಟರುಗಳ ಬಗ್ಗೆ ನನಗೆ ಈ ವಿಚಾರವಾಗಿ ಬೇಸರವಿದೆ.ಕಡಿಮೆಯೆಂದರೂ ೧೫ ರಿಂದ ೨೦ ಸಂಖ್ಯೆಯಷ್ಟು ನಾಯಕರುಗಳು ನಮ್ಮಲ್ಲಿ ಈ ಮಟ್ಟದ ಸಂಭಾವನೆ ಯನ್ನು ಪಡೆಯುತ್ತಿದ್ದರು ಈಗ ಅದರ ಪ್ರಮಾಣ ಕನಿಷ್ಠ ಪಕ್ಷ ೮ ರಿಂದ ೧೦ ಇರಬಹುದು ಎಂದಿಟ್ಟುಕೊಳ್ಳೋಣ..ಇವರೆಲ್ಲರೂ ಒಂದೊಂದು ಸಿನಿಮಾಭಿಮಾನವಿರುವ ಜಿಲ್ಲೆಗಳನ್ನು ಆಯ್ದುಕೊಂಡು ಆಯಾ ಜಿಲ್ಲಾ ಕೇಂದ್ರಗಳಲ್ಲಿ ೮ ಸ್ಕ್ರೀನ್ ಗಳಿರುವ ಮಲ್ಟಿಪ್ಲೆಕ್ಸ್ ಗಳನ್ನು ಕಟ್ಟಿಸಿ ಅದನ್ನು ತೆರೆಕಾಣುವ ಕನ್ನಡ ಸಿನಿಮಾಗಳಿಗೆಂದೇ ಮೀಸಲಿಡಬಾರದೇಕೆ? ಇದರಿಂದ ಒಂದು ಆದಾಯದ ಮೂಲವನ್ನು ಕಂಡುಕೊಳ್ಳುವುದರ ಜೊತೆಗೆ ಒಂದಿಷ್ಟು ಕುಟುಂಬಗಳಿಗೆ ಜೀವನೋಪಾಯದ ಉದ್ಯೋಗ ಸೃಷ್ಟಿಗೂ ಕಾರಣವಾಗಬಹುದು.ಹಾಗೆಯೇ ಈ ಥಿಯೇಟರ್ ಸಮಸ್ಯೆಯಿಂದ ಕನ್ನಡ ಸಿನಿಮಾಗಳನ್ನು ಸ್ವಲ್ಪ ಮಟ್ಟಿಗಾದರೂ ವಿಮುಕ್ತಿಗೊಳಿಸಬಹುದು.ಎಲ್ಲಕ್ಕಿಂತ ಹೆಚ್ಚಾಗಿ ತಾವು ಅನ್ನ ಕಂಡುಕೊಂಡ ಸಿನಿಮಾ ರಂಗದ ಋಣವನ್ನು ಈ ಮುಖೇನ ಕೊಂಚವಾದರೂ ತೀರಿಸಬಹುದು.ಈ ವಿಷಯದಲ್ಲಿ ನಾಯಕರುಗಳಷ್ಟೇ ಅಲ್ಲದೆ ಸಿನಿರಂಗದಿಂದ ಕೋಟಿ ಕೋಟಿ ಗಳಿಸಿ ಅದರಿಂದಲೇ ಹೆಸರು ಮಾಡಿ ರಾಜಕೀಯವಾಗಿಯೂ ಬೆಳೆದಿರುವ ಅದೆಷ್ಟೋ ಮಂದಿ ನಿರ್ಮಾಪಕರು ನಟ ನಟಿಯರೂ ಇದರಲ್ಲಿ ಕೈ ಜೋಡಿಸಬಹುದು.ಇದು ಸಿನಿಮಾಗೆ ಸಂಬಂಧಿಸಿದ ವ್ಯಕ್ತಿಗಳ ವಿಚಾರ.ಇದರಾಚೆಗೆ ಕನ್ನಡ ಸಿನಿಮಾ ರಂಗವನ್ನು ಬರಿ ಮಾತಿನಲ್ಲಿ ಮಾತ್ರ ಇಂಡಸ್ಟ್ರಿ ಎಂದು ಹೇಳುವ ನಮ್ಮ ಬಂದು ಹೋಗುವ ಸರ್ಕಾರಗಳು ಇದುವರೆಗೂ ನಮ್ಮಚಿತ್ರರಂಗಕ್ಕೆ ಒಳಿತಾಗುವ ಯಾವ ಲವಶೇಷದ ಕೆಲಸವನ್ನೂ ಮಾಡಿಲ್ಲ.(ಮುಂದುವರೆಯುವುದು)ಸಿನಿ ದೇವೋಭವ,❤️🙏

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear