ಸಂಗೀತ ಮತ್ತು ಸಿನಿಮಾ

ಸಿನಿಮಾ ಅಂದಾಗ ಅದರಲ್ಲೂ ಭಾರತೀಯ ಸಿನಿಮಾ ಅಂತ ಬಂದಾಗ ಅದರಲ್ಲಿ ಬಹು ಮುಖ್ಯವಾದ ಪಾತ್ರ ವಹಿಸೋದು ಸಂಗೀತ.ಇದಿಲ್ಲದೇ ನಾವು ಸಿನಿಮಾವನ್ನು ಚಿಂತಿಸಲೂ ಸಾಧ್ಯವಾಗುವುದಿಲ್ಲ.ಸಿನಿಮಾದಲ್ಲಿ ಬರುವ ಪ್ರತಿಯೊಂದು ದೃಶ್ಯದ ಅಥವಾ ಸನ್ನಿವೇಶದ ಚೆಲುವನ್ನು ಹೆಚ್ಚಿಸಿ ಮೇಳೈಸುವ ತಾಕತ್ತು ಈ ಸಂಗೀತಕ್ಕಿದೆ.ಅದೆಷ್ಟೋ ಸಿನಿಮಾಗಳಲ್ಲಿ ದೃಶ್ಯ ಅಥವಾ ಸನ್ನಿವೇಶ ಪೇಲವವಾಗಿದ್ದರು ಅದನ್ನು ಸಂಗೀತದ ಮುಖೇನ ಕಟ್ಟಿಕೊಟ್ಟಾಗ ಅದು ಅದರ ಬಣ್ಣವನ್ನೇ ಬದಲಾಗಿಸಿಕೊಂಡಿದೆ.ಒಂದು ಸಿನಿಮಾದಲ್ಲಿ ಬರುವ ಹಿನ್ನೆಲೆ ಸಂಗೀತದ ಬಗ್ಗೆ ಪ್ರೇಕ್ಷಕರು ಸಿನಿಮಾ ನೋಡಿದ ತರುವಾಯ ಮಾತನಾಡಿಕೊಳ್ಳುತ್ತಾರೆ ಸಹ.ಅಷ್ಟರ ಮಟ್ಟಿಗೆ ಇವತ್ತಿನ ಪ್ರೇಕ್ಷಕರು ಪ್ರಬುದ್ಧತೆಯನ್ನು ಮೆರೆಯುತ್ತಿದ್ದಾರೆ.ಹಾಗಾಗಿ ಸಿನಿಮಾ ಮಾಡುವಾಗ ನಾವು ಕೆಲವು ವಿಭಾಗಗಳಿಗೆ ಹೆಚ್ಚಿನ ಸಮಯ ಮತ್ತು ಮಹತ್ವವನ್ನು ನೀಡುವಂತೆ ಸಂಗೀತದ ಕಡೆಯೂ ಕೂಡ ಒಂದು ಕೈ ಹೆಚ್ಚಾಗಿಯೇ ಗಮನಹರಿಸಬೇಕಾಗುತ್ತದೆ.ಸಂಗೀತ ಅಂದ್ರೆ ಅದರಲ್ಲಿ ಹಿನ್ನೆಲೆ ಸಂಗೀತದ ಜೊತೆಗೆ ಹಾಡುಗಳೂ ಸೇರಿಕೊಳ್ಳುತ್ತದೆ.ನಮ್ಮ ಭಾರತೀಯ ಚಲನಚಿತ್ರಗಳಲ್ಲಿ ಹಾಡುಗಳಿಲ್ಲದೇ ಸಿನಿಮಾ ಮಾಡುವುದು ಊಹಿಸಿಕೊಳ್ಳಲೂ ಅಸಾಧ್ಯ.ಕೆಲವೊಂದು ಸಿನಿಮಾಗಳು ಹಾಡುಗಳಿಲ್ಲದೇ ಬಂದು ಗೆದ್ದಿದ್ದರೂ ಅವು ಬೆರಳೆಣಿಕೆಯಷ್ಟು ಮಾತ್ರ.ಅದರಲ್ಲೂ ಹಿನ್ನೆಲೆ ಸಂಗೀತ ಇರಲೇ ಬೇಕು ಅದಿಲ್ಲದೇ ಸಿನಿಮಾ ಮಾಡೋದು ಅಷ್ಟು ಉಚಿತವಲ್ಲ ಕೂಡ.ಇನ್ನು ಹಾಡುಗಳ ವಿಷಯಕ್ಕೆ ಬಂದರೆ ಕೇವಲ ಹಾಡುಗಳನ್ನು ಕೇಳಿಯೇ ಪ್ರೇಕ್ಷಕರು ಸಿನಿಮಾ ನೋಡಲು ಬರುವ ಒಂದು ಕಾಲವೂ ಇತ್ತು.ಆ ದಿನಗಳಲ್ಲಿ ಕೇವಲ ಆಡಿಯೋ ಸಾಂಗ್ಸ್ ಕೇಳುಗನ ಮನವನ್ನು ಗೆದ್ದರೆ ಸಾಕಿತ್ತು.ಆಗಲೇ ಸಿನಿಮಾದ ಅರ್ಥ ಗೆಲುವನ್ನು ಕಾಣಬಹುದಿತ್ತು.ಅದು ಬರು ಬರುತ್ತಾ ಹಾಡುಗಳನ್ನು ಕೇಳುವುದರ ಜೊತೆಗೆ ನೋಡಿ ಮಾರ್ಕ್ಸ್ ಕೊಡುವ ಪರಿಪಾಠ ಶುರುವಾಗಿದ್ದು ಟಿ.ವಿ ಯಲ್ಲಿ ಮ್ಯೂಸಿಕ್ ಚಾನಲ್ ಗಳ ಸಂಖ್ಯೆ ಹೆಚ್ಚಾದಾಗ.ತಾವು ನೋಡಿದ ಸಾಂಗ್ ಗಳು ಪ್ರೇಕ್ಷಕನ ಮನಃಪಟಲದಲ್ಲಿ ಕೂತು ಬಿಟ್ಟರೆ ಸಾಕು.ಆ ಸಿನಿಮಾವನ್ನು ಆ ಪ್ರೇಕ್ಷಕ ನೋಡಿಯೇ ನೋಡುತ್ತಾನೆ.ಅಷ್ಟರ ಮಟ್ಟಿಗೆ ಸಂಗೀತ ಸಾಹಿತ್ಯದ ಮುಖಾಂತರ ಪ್ರೇಕ್ಷಕನ್ನು ಕಾಡುವ ಒಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ.ಇನ್ನು ನಾನು ಒಬ್ಬ ಸಾಹಿತಿಯಾಗಿ ನನ್ನ ಸಿನಿಮಾಗಳಲ್ಲಿ ಚಿತ್ರಕಥೆಗೆ ನೀಡುವಷ್ಟು ಮಹತ್ವವನ್ನು ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೂ ನೀಡುತ್ತೇನೆ.ಅದರ ಫಲವಾಗಿಯೇ ನನ್ನ ಮೊದಲ ಸಿನಿಮಾ ಲವ್ ಇನ್ ಮಂಡ್ಯ ಚಿತ್ರದ ಎಲ್ಲಾ ಹಾಡುಗಳೂ ಹಿಟ್ಟಾಗಿದ್ದು.ಹಾಡುಗಳನ್ನು ಗೆಲ್ಲಿಸಿದ್ದರಿಂದಲೇ ಪ್ರೇಕ್ಷಕರು ನನ್ನ ಚೊಚ್ಚಲ ಚಿತ್ರವನ್ನು ಥಿಯೇಟರ್ ಗೆ ಬಂದು, ನೋಡಿ, ಮೆಚ್ಚಿ ಚಿತ್ರವನ್ನು ಗೆಲ್ಲಿಸಿ ಬೆನ್ನು ತಟ್ಟಿದ್ದು.ಹಾಗಾಗಿ ಈ ಸಂಗೀತ ಅನ್ನೋದು ನನ್ನ ಅನುಭವದಲ್ಲಿ ತುಂಬಾ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.ಈ ವಿಷಯ ಕಾಲಾನು ಕಾಲದಿಂದಲೂ ತನ್ನ ಶಕ್ತಿಯನ್ನು ತೋರುತ್ತಾ ಬಂದಿದೆ ಕೂಡ. ಕನ್ನಡ ಚಿತ್ರರಂಗದ ಮಟ್ಟಿಗೆ ನೋಡಿದರೆ ಹಂಸಲೇಖ ಮತ್ತು ರವಿಚಂದ್ರನ್ ರ ಜೋಡಿ ಸಿನಿ ಸಂಗೀತದಲ್ಲಿ ಮಾಡಿದ ಮೋಡಿಯನ್ನು ಯಾರಾದರೂ ಮರೆಯಲು ಸಾಧ್ಯವೇ?ಹಾಗೆ ಅಣ್ಣಾವ್ರು ,ಪಿ.ಬಿ.ಶ್ರೀನಿವಾಸ್,ಎಸ್.ಪಿ.ಬಿ ಮಂಜುಳಾ ಗುರುರಾಜ್,ಜಾನಕಮ್ಮ,ಸುಮಿತ್ರಾ ಮೇಡಂ,ಸುಶೀಲಮ್ಮ ಎಂಥೆಂಥ ದಿಗ್ಗಜರು ಅದೆಷ್ಟು ಕೊಡುಗೆಯನ್ನು ಕನ್ನಡ ಸಿನಿಮಾಗೆ ನೀಡಿದ್ದಾರೆ.ಅವೆಲ್ಲವನ್ನು ಮಾತಿನಲ್ಲಿ ಕೆಲ ಪದಗಳಲ್ಲಿ ಹೇಳಲಾಗದು.ಕೇವಲ ಒಂದೇ ಹಾಡಿನಿಂದ ಇಡೀ ಸಿನಿಮಾ ಗೆದ್ದ ಉದಾಹರಣೆಯೂ ಇಲ್ಲದಿಲ್ಲ.ಒಟ್ಟಾರೆಯಾಗಿ ಸಂಗೀತವಿಲ್ಲದ ಸಿನಿಮಾ ಪ್ರಾಣವಿಲ್ಲದ ಬೊಂಬೆಯಂತೆ ಅಂಬೋದು ನನ್ನ ಅನಿಸಿಕೆ.ನಿಮದು? ಸಿನಿ ದೇವೋಭವ ❤️🙏

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear