Jogi

Jogi

ಯಶಸ್ವಿ ನಿರ್ಮಾಪಕಆಗುವುದು ಹೇಗೆ?

‘ನಾವೆಲ್ಲ ಒಂಥರಾ ಪೀಕೆ ಸಿನಿಮಾದ ಹೀರೋ ಥರಾ ಸಾರ್. ರೀಮೋಟ್ ಕಂಟ್ರೋಲ್ ಕಳ್ಕೊಂಡಿದ್ದೀವಿ. ಯಾವುದೋ ಜಗತ್ತಿಗೆ ಬಂದ್ ಬಿದ್ದಿದ್ದೀವಿ. ನಾವು ಕಳ್ಕೊಂಡ ರಿಮೋಟ್ ಕಂಟ್ರೋಲ್ ವಾಪಸ್ ಸಿಕ್ರೆ, ಇಲ್ಲಿಂದ ಹೊಂಟೋಯ್ತೀವಿ. ಅದು ಸಿಗೋ ತನ್ಕ ಹುಡುಕ್ತಾನೇ ಇರ್ತೀವಿ.’ ಹಾಗಂತ ಹೇಳಿ ಅವರು ಸುಮ್ಮನಾದರು. ಅವರೊಳಗೆ ಒಂದು ಮಣ ನೋವು ತುಂಬಿಕೊಂಡಂತಿತ್ತು. ಸಾಲದ್ದಕ್ಕೆ ದಿನವೂ ನೋವಿನ ಮಾತ್ರೆ ತಿನ್ನುತ್ತಿದ್ದರಂತೆ. ಅವು ನೋವು ನಿವಾರಕ ಮಾತ್ರೆಗಳು ಅಂತ ನೋವಿನ ಮಾತ್ರೆಗಳಲ್ಲ ಅಂತ ತಮಾಷೆ

Read More »
Parent and child hands handing flowers
Jogi

ನನ್ನ ಮಗನಿಗೊಂದು ಲೈಫು ಕೊಡಿ!

ನನ್ನ ಮಗನನ್ನು ಲಾಂಚ್ ಮಾಡ್ತಾ ಇದ್ದೀನಿ. ನಾಡಿದ್ದು ಬೆಳಗ್ಗೆ ಮುಹೂರ್ತ ಸಮಾರಂಭ. ತುಂಬ ದೊಡ್ಡ ಸಿನಿಮಾ ಮಾಡ್ತಿದ್ದೇವೆ. ಇದಕ್ಕೋಸ್ಕರ ಒಬ್ಬರು ದೊಡ್ಡ ನಿರ್ದೇಶಕರನ್ನು ಗೊತ್ತು ಮಾಡಿದ್ದೀನಿ. ಅವರೇ ಅವನ ಸಿನಿಮಾದ ಮೊದಲ ದೃಶ್ಯ ಡೈರೆಕ್ಟ್ ಮಾಡ್ತಾರೆ. ಒಂಚೂರು ಪಬ್ಲಿಸಿಟಿ ಬೇಕಲ್ಲ… ಹಾಗಂತ ಸಿನಿಮಾ ಪತ್ರಕರ್ತರಿಗೆ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಹಿರಿಯ ನಿರ್ದೇಶಕರು, ಮಾಜಿ ನಟರು, ಮಾಜಿ ರಾಜಕಾರಣಿಗಳು, ಪ್ರಸಿದ್ದ ಸ್ಟಾರುಗಳು, ಸೋತ ನಿರ್ಮಾಪಕರು, ರಿಯಲ್ ಎಸ್ಟೇಟು ನಂಬಿಕೊಂಡ ಮಣ್ಣಿನ

Read More »
Jogi

ನಿರ್ದೇಶಕನ ಉದ್ದೇಶ ಕತೆಗಾರನನ್ನು ತೃಪ್ತಿಪಡಿಸುವುದಲ್ಲ

ನಾನು ಮೊಟ್ಟ ಮೊದಲು ನೋಡಿದ ಸಿನಿಮಾ ರಾಜ್ ಕುಮಾರ್ ಅಭಿನಯದ ಮಯೂರ. ಆ ಸಿನಿಮಾ ನೋಡುವ ಮೊದಲೇ ನಾನು ದೇವುಡು ಬರೆದ ಮಯೂರ ಕಾದಂಬರಿಯನ್ನು ಹತ್ತಾರು ಬಾರಿ ಓದಿದ್ದೆ. ಅದೇ ಮೊದಲ ಬಾರಿಗೆ ನೋಡುತ್ತಿದ್ದಂತೆ ನಾನು ಓದಿದ ದೃಶ್ಯಗಳೇ ತೆರೆಯ ಮೇಲೆ ಒಂದರ ಹಿಂದೊಂದರಂತೆ ಬರುತ್ತಿದ್ದವು. ಕಾದಂಬರಿಯಲ್ಲಿ ಸ್ಥಿರವಾಗಿದ್ದ ಪಾತ್ರಗಳು ಇದ್ದಕ್ಕಿದ್ದಂತೆ ಚಲನಶೀಲವಾದವು. ಕಾದಂಬರಿ ಓದುತ್ತಿದ್ದಾಗ ನಾನು ಗ್ರಹಿಸುತ್ತಿದ್ದದ್ದು, ತೆರೆಯ ಮೇಲೆ ನಿಜವಾಗುತ್ತಾ ನಡೆದಿತ್ತು. ಜಟ್ಟಿಗಳ ನಡುವೆ ಕುಸ್ತಿ ಆಡುವ

Read More »
Jogi

ನಿರ್ದೇಶಕ ಎಂಬ ಬಡ ರೈತ

ಚಿತ್ರರಂಗ ಮೂಲತಃ ನಿರ್ದೇಶಕರ ಕರ್ಮಭೂಮಿ. ಅಲ್ಲಿ ನಿರ್ಮಾಪಕ ಒಬ್ಬ ವ್ಯಾಪಾರಿ, ನಟ ಒಬ್ಬ ಸಂಚಾರಿ, ಪ್ರೇಕ್ಷಕ ಸಹಚಾರಿ. ಹೀಗಂದ ಮೇಲೆ ಹೊಸ ಆಲೋಚನೆಗಳೇನಾದರೂ ಹುಟ್ಟುವುದಿದ್ದರೆ ಅದು ನಿರ್ದೇಶಕನ ಮೂಲಕವೇ ಆಗಬೇಕು. ಅವನು ರೈತನಿದ್ದ ಹಾಗೆ. ತನ್ನ ಮುಂದಿರುವ ಎಂಟೆಕರೆ ಹೊಲದಲ್ಲಿ ಟೊಮ್ಯಾಟೋ ಬೆಳೆಯಬೇಕೋ, ಕಲ್ಲಂಗಡಿಯೋ ಅಂತ ಅವನೇ ನಿರ್ಧಾರ ಮಾಡುವವನು. ಹಾಗೆ ನಿರ್ಧರಿಸುವ ಹೊತ್ತಿಗೆ ಅವನು ಮಣ್ಣಿನ ಗುಣ, ತನ್ನಲ್ಲಿರುವ ಬೀಜ, ನೀರಾವರಿ ವ್ಯವಸ್ಥೆ, ಮುಂಗಾರು ಮಳೆ- ಎಲ್ಲವನ್ನೂ ಲೆಕ್ಕ

Read More »
Jogi

ಕನ್ನಡ ಕತೆಗಾರನ ನಾಯಿಪಾಡು

ಕನ್ನಡದಲ್ಲಿ ಕತೆಗಾರರಿಲ್ಲವೇ? ಯಾಕೆ ರೀಮೇಕ್ ಮಾಡುತ್ತೀರಿ? ಯಾಕೆ ಬೇರೆಲ್ಲಿಂದಲೋ ಕತೆ ಕದಿಯುತ್ತೀರಿ? ಎಂಟು ಜ್ಞಾನಪೀಠ ಪಡೆದ ಭಾಷೆ ನಮ್ಮದು, ಇಲ್ಲಿ ಕತೆಗಳಿಗೆ ಬರವೇ? ಅಂತ ಮೊನ್ನೆ ಮೊನ್ನೆಯೂ ವೇದಿಕೆಯಲ್ಲಿ ಯಾರೋ ಮಾತಾಡುತ್ತಿದ್ದರು. ಅವರ ಕನ್ನಡ ಪ್ರೇಮವನ್ನು ಮುಕ್ತಕಂಠದಿಂದ ಮೆಚ್ಚಲೇಬೇಕು. ಕನ್ನಡದಲ್ಲಿ ಕತೆಗಾರರಿದ್ದಾರೆ. ವರುμಕ್ಕೆ ಏಳು ಸಾವಿರ ಪುಸ್ತಕಗಳು ಬಿಡುಗಡೆ ಆಗುತ್ತವೆ. ಅವುಗಳಲ್ಲಿ ಒಂದು ಸಾವಿರ ಕಾದಂಬರಿಗಳಿರುತ್ತವೆ. ಐನೂರು ಕಥಾಸಂಕಲನಗಳಿರುತ್ತವೆ. ಒಂದೊಂದರಲ್ಲಿ ಹತ್ತು ಕತೆಗಳೆಂದುಕೊಂಡರೂ ಐನೂರು ಕತೆಗಳಾದವು. ಇನ್ನು ಏಳು ಪತ್ರಿಕೆಗಳಲ್ಲಿ

Read More »
Jogi

ಓಟಿಟಿಯಲ್ಲಿ ಸಿನಿಮಾ ನೋಡುವುದು ನಿರ್ದೇಶಕನಿಗೆ ಮಾಡುವ ಅವಮಾನ

ನಾವು ಸಿನಿಮಾ ಹೇಗೆ ನೋಡಬೇಕು ಅಂತ ಯೋಚಿಸುತ್ತಿದ್ದೆ. ಸಾಮಾನ್ಯವಾಗಿ ಚಿತ್ರಮಂದಿರಕ್ಕೆ ಹೋಗಿ, ಕತ್ತಲಲ್ಲಿ ಎಲ್ಲರೊಂದಿಗೆ ಕರಗಿ ಹೋಗಿ, ಪಕ್ಕದಲ್ಲಿ ಇರುವವನು ಯಾರು ಅಂತ ಗೊತ್ತಿಲ್ಲದೇ ಇದ್ದರೂ ಅವನೂ ನಾನೂ ಒಂದೇ ಆಗಿ, ಸಾಮೂಹಿಕವಾಗಿ ನಕ್ಕು, ಸಾಮೂಹಿಕವಾಗಿ ಅತ್ತು, ಸಾಮೂಹಿಕವಾಗಿ ಸಿಟ್ಟು ಮಾಡಿಕೊಂಡು, ಸಿನಿಮಾ ಮುಗಿದ ನಂತರ ಅದ್ಯಾವುದೋ ಗುಂಗಿನಲ್ಲಿ ಥೇಟರಿನಿಂದ ಹೊರಬೀಳುವುದನ್ನು ರೂಢಿಸಿಕೊಂಡವನು ನಾನು. ನನ್ನ ಹಾಗೆಯೇ ನನ್ನ ತಲೆಮಾರಿನ ಜನ ಅಂದುಕೊಂಡಿದ್ದೇನೆ. ಇವತ್ತಿಗೂ ನಾನು ಕಂಪ್ಯೂಟರಿನಲ್ಲಿ ಸಿನಿಮಾ ನೋಡಲಾರೆ.

Read More »

Load Reels Clear
Clear