Mansore

Mansore

ಫಹಾದ್ – ಹೊಸ ತಲೆಮಾರಿನ ನಟ

ನಾನು ಕಲಾ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ, ನನಗೆ ನಟರೊಂದಿಗೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ಅಷ್ಟು ಆಸಕ್ತಿ ಇದ್ದಿರಲಿಲ್ಲ. ಅದರ ಬಗ್ಗೆ ಈಗ ನನಗೆ ಕೊರಗೇನೂ ಇಲ್ಲ. ಆ ಕೊರಗು ಇದ್ದರೆ ಅದು ಫಹಾದ್ ಅವರ ಬಗ್ಗೆ ಮಾತ್ರ. 2014ರಲ್ಲಿ ಈ ಜಾಹೀರಾತಿಗೆ ಕೆಲಸ ಮಾಡಿದಾಗ ಇವರ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಯಾರೋ ಮಲಯಾಳಂ ನಟನಂತೆ ಎಂದು ಸೆಟ್ಟಲ್ಲಿ ಮಾತನಾಡಿಕೊಳ್ಳುತ್ತಿದ್ದರೂ ಇವರು ಯಾವ ಹಮ್ಮು ಬಿಮ್ಮು ಇಲ್ಲದೆ ಆರಾಮಾಗಿ ನಮ್ಮ ಮುಂದೇನೆ

Read More »
Mansore

ವೇರ್ ಡು ವಿ ಗೋ ನೌ?

2018ರಲ್ಲಿ ಬಿಡುಗಡೆಯಾಗಿ ಹೆಚ್ಚು ಚರ್ಚೆಗೆ ಒಳಗಾದ Capernaum ಸಿನೆಮಾದ ನಿರ್ದೇಶಕಿ ಲೆಬನಾನಿನ ‘ನದಿನೆ ಲಬಾಕಿ’ ಯವರು ನಟಿಸಿ ನಿರ್ದೇಶಿಸಿದ ಸಿನೆಮಾ ವೇರ್ ಡು ವಿ ಗೋ ನೌ. ಈ ಸಿನೆಮಾ ತನ್ನ ಕಥೆಯಿಂದಲೇ ಹೆಚ್ಚು ಇಷ್ಟವಾಗುತ್ತದೆ. ಈ ಕಥೆ ನಡೆಯುವುದು ಲೆಬನಾನಿ ಒಂದು ಅನಾಮದೇಯ ಪುಟ್ಟ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸಲ್ಮಾನರು ಮತ್ತು ಕ್ರಿಷ್ಚಿಯನ್ನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿರುತ್ತಾರೆ. ಹಾಗಂತ ಇದು ಪರಿಪೂರ್ಣವಾಗಿ ಮಾದರಿ ಗ್ರಾಮವೂ ಅಲ್ಲ. ಆ ಹಳ್ಳಿ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 7

ವಿಸಿಪಿ ಊರೊಳಗೆ ಹೋಗಿದೆ ಎಂದರೆ ನಾವೆಲ್ಲಾ ಅಲರ್ಟ್ ಆಗಿ ಸಾಧ್ಯವಾದಷ್ಟೂ ಬೇಗನೆ ಹಸುಗಳನ್ನು ಮನೆಗೆ ಹೊಡೆದುಕೊಂಡು ಹೋಗುತ್ತಿದ್ದೆವು. ರಾತ್ರಿಗೆ ಹಸುಗಳಿಗೆ ಒಣ ಹುಲ್ಲು ತಂದು ಜೋಡಿಸಿ, ಹಾಲನ್ನು ಒಂದು ಕಿಮೀ ದೂರದ ನಂಗಲಿಯ ಡೈರಿಗೆ ಹಾಕಿ, ಓಡಿ ಬಂದು ಆತುರಾತುರವಾಗಿ ಊಟ ಮಾಡಿ, ಹೊದಿಕೆಯೊಂದನ್ನು ಸುತ್ತಿಕೊಂಡು ಹೋಗಿ ಟಿವಿಯ ಮುಂದೆ ಕೂತರೆ ಮುಗಿಯಿತು. ಮರುದಿನದ ಸ್ಕೂಲಿಗೆ ಚಕ್ಕರ್. ಮುಂಜಾನೆ 4-5 ಗಂಟೆಯವರೆಗೂ ಸಾಲಾಗಿ ನಾಲ್ಕೈದು ಸಿನೆಮಾಗಳನ್ನು ನೋಡುವ ತನ್ಮಯತೆ ಆ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 6

ಸಿನೆಮಾ ನೋಡುವ ಹುಚ್ಚು ಹೆಚ್ಚಾಗುವ ಅವಕಾಶಗಳು ಸಿಕ್ಕಿದ್ದು, ನಾವು ಏನಿಗದಲೆ ಇಂದ ಸ್ವಂತ ಊರಿಗೆ ಬಂದ ಮೇಲೆ. ನಮ್ಮೂರು ಕೋಲಾರ ಜಿಲ್ಲೆಯ ಗಡಿಭಾಗದಲ್ಲಿರುವ ನಂಗಲಿ, ಬಳಿ ಇರುವ ಎನ್.ವೆಂಕಟಾಪುರ ಎಂಬ ಕುಗ್ರಾಮ. ಸರಾಸರಿ 43 ಮನೆಗಳಷ್ಟೇ ಇರುವುದು. ನಮ್ಮ ಹಳ್ಳಿಯಿಂದ ಆಂಧ್ರದ ಗಡಿ ಬರೀ ಮೂರು ಕಿಲೋಮೀಟರಷ್ಟೇ. ನಮ್ಮ ಸಂಬಂಧಿಕರು ಆಂದ್ರದಲ್ಲೇ ಹೆಚ್ಚಾಗಿರುವುದು. ನೂರಾರು ವರ್ಶಗಳ ಹಿಂದೆ, ಕರ್ನಾಟಕ-ಆಂಧ್ರ ಎಂಬ ಗಡಿ ಗುರುತಿಸುವುದಕ್ಕೂ ಮೊದಲು ನಮ್ಮ ಪೂರ್ವಜರು ಈ ಹಳ್ಳಿಗೆ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 5

ಚಿನ್ಮಯ ಸ್ಕೂಲ್ ಪಕ್ಕದಲ್ಲೇ ಅಂಜನಿ ಥಿಯೇಟರ್, ನಾವೆಲ್ಲಾ ಹೋಗಿ ಸರತಿಯಲ್ಲಿ ನಿಲ್ಲುವ ವೇಳೆಗೆ ಜನಸಂದಣಿ ಮತ್ತಷ್ಟು ಹೆಚ್ಚಾಯಿತು. ಅಂದು ಭಾನುವಾರ ಹಾಗೂ ಥಿಯೇಟರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಿನೆಮಾ ‘ಮುಠಾ ಮೇಸ್ತ್ರಿ’ . ಕೆಲ ಹೊತ್ತಿಗೆ ಮಾರ್ನಿಂಗ್ ಶೋ ಮುಕ್ತಾಯವಾಗಿ ಜನರೆಲ್ಲಾ ಹೊರಬರುತ್ತಿದ್ದರು. ನಾನು ಅಪ್ಪನಿಗಾಗಿ ಹುಡುಕಾಡುತ್ತಿದ್ದೆ. ಅಪ್ಪ ಹೊರಗೇನೊ ಬಂದರು, ನನ್ನ ಕಣ್ಣಿಗೂ ಕಾಣಿಸಿಕೊಂಡರು, ಆದರೆ ಆ ಜನಸಂದಣಿಯಲ್ಲಿ ನನ್ನ ಕೂಗು ಅವರಿಗೆ ಕೇಳಿಸಲೇ ಇಲ್ಲಾ. ಜನರ ನೂಕು ನುಗ್ಗಲಿನಲ್ಲಿ ಹಾಗೇ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 4

ಅಪ್ಪನಿಂದ ರಕ್ತಗತವಾಗಿ ಬಂದ ಈ ಸಿನೆಮಾ ನೋಡುವ ಅಭ್ಯಾಸ, ಮುಂದೆ ಸ್ವತಂತ್ರವಾಗಿ ಅವರ ನೆರಳಿನಾಚೆಗೆ ಹೊರ ಬಂದು ಸಿನೆಮಾ ನೋಡಲು ಕಾರಣವಾಗಲು ಕೂಡ ಅಪ್ಪನೇ ಕಾರಣ. ಅಪ್ಪ-ಅಮ್ಮನ ಜೊತೆಯಿಲ್ಲದೆ ಥಿಯೇಟರಿನಲ್ಲಿ ಸಿನೆಮಾ ನೋಡುವ ಅವಕಾಶ ಮಾಡಿಕೊಟ್ಟವರು ನಮ್ಮ ಅಪ್ಪ. ಅದು ಅವರು ಉದ್ಧೇಶಪೂರ್ವಕವಾಗಿ ಮಾಡಿದ್ದಲ್ಲವಾದರೂ, ಮುಂದೆ ಕೆಲವೇ ವರ್ಷಗಳಲ್ಲಿ, ಬೇರೆಯವರ ಜೊತೆಗೂಡಿ ಸಿನೆಮಾ ನೋಡಲು ಆರಂಭಿಸಿದವನು, ಎಂಟನೇ ತರಗತಿಯಲ್ಲಿದ್ದಾಗ ಸ್ಪೋರ್ಟ್ಸ್ ನೋಡುವ ನೆಪದಲ್ಲಿ ಮುಳಬಾಗಿಲಿನಲ್ಲಿ ‘ಬೇಬಿಸ್ ಡೇ ಔಟ್ ಹಾಗೂ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 3

ಈಗೆಲ್ಲಾ ಚಲನಚಿತ್ರೋತ್ಸವದಲ್ಲಿ ಬೆಳಗಿಂದ ರಾತ್ರಿಯವರೆಗೆ ತಡೆ ಇಲ್ಲದೆ ನೋಡಿದರೆ ಐದು ಸಿನೆಮಾಗಳನ್ನು ನೋಡಬಹುದು. ಕೆಲ ಸಿನಿವೀರರು ಆರು ಸಿನೆಮಾಗಳನ್ನು ನೋಡುವವರು ಇದ್ದಾರೆ. ನನಗೆ ಈ ಸಿನೆಮಾ ನೋಡುವ ಮ್ಯಾರಾಥಾನ್ ಅಭ್ಯಾಸವಾಗಿದ್ದು ಬಾಲ್ಯದಲ್ಲೇ. ನಮ್ಮ ಮನೆಗೆ ಟಿವಿ ಬಂದಿದ್ದು 89-90ರಲ್ಲಿ . ಅಪ್ಪನಿಗೆ ಶಿವಾರಗುಡ್ಡದಿಂದ, ಚಿಂತಾಮಣಿ ತಾಲ್ಲೂಕಿನ ಏನಿಗದಲೆ ವಿಧ್ಯಾಪೀಠಕ್ಕೆ 1984ರಲ್ಲಿ ವರ್ಗಾವಣೆ ಆಗಿತ್ತು. ಅಪ್ಪ ಡಿ ಗುಂಪಿನ ನೌಕರಾಗಿ ನೇಮಕಗೊಂಡು, ಕೆಲಸ ಖಾಯಂ ಆಗಿತ್ತು. ಆಗಿನ ಕಾಲಕ್ಕೆ ತಿಂಗಳಿಗೆ 200-300

Read More »
Mansore

ಹೆಣ್ಣಿನ ದೇಹ ಗ್ಲಾಮರ್ ಮತ್ತು ಸೇಲ್

ಇತ್ತೀಚಿನ ಕೆಲವು ವೆಬ್ ಸೀರೀಸ್ ಹಾಗೂ ಸಿನೆಮಾಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಆಧರಿಸಿದ ಕಥೆಗಳು ಸಾಕಷ್ಟು ಬರುತ್ತಿವೆ. ಆದರೆ ಅವುಗಳಲ್ಲಿ ಹೆಣ್ಣಿಗೆ ಸಂಬಂಧಿಸಿದ ಸೂಕ್ಷ್ಮತೆಯ ವಿಷಯದಲ್ಲಿ ಕಥೆಯೊಳಗಿನ ದೌರ್ಜನ್ಯಕ್ಕಿಂತ ತೆರೆಯ ಮೇಲೆ ದೃಶ್ಯರೂಪದ ದೌರ್ಜನ್ಯವೇ ಹೆಚ್ಚು ಕಣ್ಣಿಗೆ ರಾಚುತ್ತದೆ. ಇದರ ಬಗ್ಗೆ ಯೋಚಿಸುತ್ತಿದ್ದಾಗ, ಹೀಗೆ ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಸಿನೆಮಾ ಸುದ್ಧಿ ನೆನಪಾಯಿತು, ಅದು ಮಹಿಳಾ ಪ್ರಧಾನ ಸಿನೆಮಾ, ಹೆಣ್ಣಿಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಗಂಭೀರ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 2

ನಮ್ಮ ತಂದೆಗೆ ಇದ್ದ ಸಿನೆಮಾ ನೋಡುವ ಹುಚ್ಚು ಪ್ರೀತಿಗೆ ಮಿತಿಯೇ ಇರಲಿಲ್ಲ. ಅದು 70ರ ದಶಕ. ಅವರು ಮಂಡ್ಯದ ಶಿವಾರಗುಡ್ಡ ವಿಧ್ಯಾಪೀಠದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವಾಗ, ವಿಧ್ಯಾಪೀಠದಿಂದ ಬೆಸಗರಹಳ್ಳಿಯ ಡೈರಿಗೆ ಹಾಲು ಹಾಕಲು ಸಂಜೆ ಹೋಗುವ ಹೊತ್ತಿಗೆ ಬಸ್ ಸ್ಟ್ಯಾಂಡಿನ ಬಳಿ ಇದ್ದ ಸಿನೆಮಾ ಟೆಂಟಿನಲ್ಲಿ ಫಸ್ಟ್ ಶೋ ಇಂಟರ್ವೆಲ್ ಬಿಡುವ ಸಮಯ. ಇವರು ಡೈರಿಗೆ ಹಾಲು ಹಾಕಿ, ಇಂಟರ್ವೆಲ್ ಸಮಯದಲ್ಲಿ ಬೀಡಿ ಸೇದಲು ಹೊರಬರುವ ಜನರೊಂದಿಗೆ ಒಳ

Read More »
Mansore

ಮಾಯಾಲೋಕದೊಳಗೆ ನನ್ನ ಪ್ರವೇಶ | ಭಾಗ 1

ಇಂದು ಚಿತ್ರರಂಗದಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ನಾನು, ಆಗಾಗ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ, ಯಾವುದೋ ಹಾದಿಯ ಕನಸನು ಹೊತ್ತು ಬೆಂಗಳೂರಿಗೆ ಬಂದ ನಾನು ಅದು ಹೇಗೆ ಈ ಚಿತ್ರರಂಗದಲ್ಲಿ ನನ್ನ ಭವಿಷ್ಯ ಹುಡುಕಲು ಹೊರಟುಬಿಟ್ಟೆ? ಸಿನೆಮಾ ನೋಡುವುದನ್ನು ಬಿಟ್ಟು ನನ್ನಿಡೀ ಕುಟುಂಬದವರಲ್ಲಿ ಯಾರಿಗೂ ನಂಟಿಲ್ಲದ ಈ ಸಿನೆಮಾ ಎಂಬ ಮಾಯಾಲೋಕಕ್ಕೆ ನಾನು ಹೇಗೆ ಪೂರ್ಣವಾಗಿ ಪ್ರವೇಶಿಸಿಬಿಟ್ಟೆ ಎಂದು ಆಲೋಚಿಸುತ್ತಿರುತ್ತೇನೆ. ಸಿನೆಮಾದ ವ್ಯಾಕರಣವೇ ತಿಳಿಯದ ನಾನು ಈ ಪ್ರಾಥಮಿಕ ಹಂತಗಳನ್ನು

Read More »

Load Reels Clear
Clear